ನನ್ನ ಮುದ್ದಿನ ಕೂಸಿಗೆ..ನನ್ನ ಕನಸಿನ ಶಿಕ್ಷಣಧಾರೆಯ ಉದ್ಭವ !
ಪ್ರಕೃತಿ ಮಾತೆಯ ಮಡಿಲಿನಲ್ಲಿ..ಉನ್ನತ ಗುರುವೃಂದದ ಸಂಗದಲ್ಲಿ..
ನನ್ನ ಕೂಸಿನ ಬೆಳವಣಿಗೆಯ ಅನುಭವದ ಉದ್ಭವ !
ಥಳುಕು ಬಳುಕು..ಬೆಡಗು ಬಿನ್ನಾಣಗಳಿಲ್ಲದ….ಸಹಜ ಸರಳ ಸುಂದರ ಕಲಿಕೆಯ ಅನುಭವದ ಉದ್ಭವ!
ಸಂಗೀತ ನಾಟ್ಯಾದಿಯಾಗಿ ಸಕಲ ಜೀವನ ಕಲೆಗಳ ಪರಿಚಯಿಸುವ ಅನುಭವದ ಉದ್ಭವ!
ಪಂಚಭೂತಗಳ ಸಾಕ್ಷ್ಯದಲ್ಲಿ..ನನ್ನ ಕೂಸಿನ ಪಾಲನೆ ಪೋಷಣೆಯ ಅನುಭವದ ಉದ್ಭವ!
ಶಿಶು ಸಹಜ ಮಾನಸಿಕ ದೈಹಿಕ ತಡೆಗಳ ಗುಣಪಡಿಸಿ..
ನನ್ನ ಕೂಸಿಗೆ ಹಿತವೆನಿಸುವ ಶಿಕ್ಷಣದ ಉದ್ಭವ!
ನನ್ನ ಕೂಸಿನ ಮುಂಬರುವ ಸುಂದರ ಬದುಕಿನ ರೆಕ್ಕೆಗೆ….
ಬಣ್ಣ ಬಣ್ಣದ ಪುಕ್ಕ ಕಟ್ಟುವ ಪರಿಸರದ ಉದ್ಭವ!
ನನ್ನ ಮುದ್ದಿನ ಕೂಸಿಗೆ…ನನ್ನ ಕನಸಿನ ಶಿಕ್ಷಣಧಾರೆಯ ಉದ್ಭವ!
ನಮಗಾಗಿ ಉದ್ಭವಿಸಿದ ಸಹಜ ಸರಳ ವಿಶ್ವ ವಿದ್ಯಾನಿಲಯ ಈ ಉದ್ಭವ: !!
-ಪ್ರಮೋದ್